About Us

ಉತ್ತಮ ಗುಣಮಟ್ಟದ ವಿವಿಧ ಪ್ರಕಾರದ ಸಾಹಿತ್ಯಕ ಕೃತಿಗಳನ್ನು ಪ್ರಕಟಿಸುವ ಉದ್ದೇಶ ಹೊತ್ತು 2011 ರಲ್ಲಿ 'ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್' ಆರಂಭಗೊಂಡಿತು.ಪುಸ್ತಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆವರೆಗೂ ಬೆಳೆಸುವ ಹಾಗೂ ಓದುವ ಅಭಿರುಚಿ-ಆಸಕ್ತಿಯನ್ನು ಹೆಚ್ಚಿಸಬೇಕೆಂಬುದು ಸಂಸ್ಥೆಯ ಉದ್ದೇಶ. ಇದುವರೆಗೂ 15ಕ್ಕೂ ಮೌಲಿಕ ಕೃತಿಗಳು ಪ್ರಕಟಿತಗೊಂಡಿವೆ. ಸದ್ಯ ಪುಸ್ತಕ ಪ್ರಕಾಶನ ಮತ್ತು ಮಾರಾಟಕ್ಕಿರುವ ಕಠಿಣ ಪರಿಸ್ಥಿತಿಯನ್ನು ನೋಡಿದಾಗ, ಕೊಂಡು ಓದುವ ಸಂಸ್ಕೃತಿ ಮತ್ತು ಉತ್ತಮ ಪುಸ್ತಕಗಳು ಓದುಗರಿಗೆ ಸಿಗದೇ ಇರುವಂತಾಗಿದೆ. ಕರ್ನಾಟಕ ಮಾತ್ರವಲ್ಲದೇ, ಹೊರರಾಜ್ಯ ಮತ್ತು ಹೊರರಾಷ್ಟ್ರಗಳಲ್ಲಿ ನೆಲೆಸಿರುವಂತಹ ಕನ್ನಡ ಓದುಗರಿಗೆ ಸದಭಿರುಚಿಯ ಪುಸ್ತಕಗಳನ್ನು ತಲುಪಿಸುವ ನಿಟ್ಟಿನಲ್ಲಿ ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ ಸಂಸ್ಥೆ `ಪಂಚಮಿ ಆನ್ ಲೈನ್ ಮೂಲಕ ಪುಸ್ತಕಗಳನ್ನು ಮಾರಾಟ ಮಾಡುವ ಸಾಹಸಕ್ಕೆ ಮುಂದಾಗಿದೆ.


ಇಂದು ಕನ್ನಡದಲ್ಲಿ ವರ್ಷಕ್ಕೆ ಸಾವಿರಾರು ಪುಸ್ತಕಗಳು ಪ್ರಕಟವಾಗುತ್ತವೆ. ದೊಡ್ಡ ಮಟ್ಟದ ಪ್ರಕಾಶಕರಿಗೆ ಪುಸ್ತಕೋದ್ಯಮ ವರದಾನವೂ ಆಗಿದೆ. ಆದರೆ ಹವ್ಯಾಸಿ ಪ್ರಕಾಶಕರು, ಲೇಖಕರಿಗೆ ಮಾತ್ರ ತಮ್ಮ ಪುಸ್ತಕಗಳನ್ನು ಹೇಗೆ ಮಾರಾಟ ಮಾಡುವುದು ಎಂಬುದೇ ದೊಡ್ಡ ಚಿಂತೆಯಾಗಿ ಕಾಡುತ್ತಿದೆ. ಓದುಗರಿಗೂ ಸರಿಯಾದ ಮಾಹಿತಿ ಸಿಗದೆ ಯಾವ ಪುಸ್ತಕಗಳನ್ನು ಕೊಂಡು ಓದಬೇಕು ಎಂಬ ಗೊಂದಲವೂ ಇದೆ. ಓದುಗರ ಅಭಿರುಚಿ, ಆಸಕ್ತಿಗೆ ತಕ್ಕಂತೆ ಮನೆಬಾಗಿಲಿಗೆ ಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆಗಳೂ ಸಮರ್ಪಕವಾಗಿಲ್ಲ. ಹಾಗಾಗಿ ಓದುಗರು, ಲೇಖಕರು, ಪ್ರಕಾಶಕರ ನಡುವೆ ಸ್ನೇಹಸೇತು ಕಟ್ಟುವ ಕೆಲಸವನ್ನೂ ನಮ್ಮ ಟೀವಿ ಮಾಧ್ಯಮಗಳಂತೂ ಮಾಡುತ್ತಲೇ ಇಲ್ಲ. ಇನ್ನು ಪತ್ರಿಕೆಗಳಲ್ಲಿ ಇಂಥ ಕೆಲಸ ಬೆರಳೆಣಿಕೆಯಷ್ಟು ಮಾತ್ರ ಆಗುತ್ತಿದೆ. ಈ ಕಾರಣಕ್ಕೆ ಅದೆಷ್ಟೋ ಹವ್ಯಾಸಿ ಪ್ರಕಾಶಕರು, ಲೇಖಕರು, ಓದುಗರು ಎಲೆಮರೆಕಾಯಿ ಆಗಿಯೇ ಉಳಿದುಬಿಟ್ಟಿದ್ದಾರೆ. ಇವರೆಲ್ಲರನ್ನೂ ಒಂದೇ ವೇದಿಕೆಗೆ ತಂದು ಓದುವ ಪುಸ್ತಕ ಸಂಸ್ಕೃತಿಯನ್ನು ಉಳಿಸಿಬೆಳೆಸುವ ಉದ್ದೇಶ ಹೊತ್ತು 'ಪಂಚಮಿ ಆನ್ಲೈನ್ ಡಾಟ್ ಕಾಮ್' ಆರಂಭಗೊಂಡಿದೆ.


ನಮ್ಮ ಪ್ರಕಾಶನದ ಪುಸ್ತಕಗಳನ್ನು ಮಾತ್ರವಲ್ಲದೇ, ಬೇರೆ ಪ್ರಕಾಶಕರು, ಲೇಖಕರ ಪುಸ್ತಕಗಳನ್ನು ಈ ವೇದಿಕೆಯ ಮೂಲಕ ಪರಿಚಯಿಸಿ ಆನ್ಲೈನ್ ಮಾರಾಟ ಮಾಡುವ ಪ್ರಯತ್ನ ಇದಾಗಿದೆ. ಹೊಸ ಪ್ರಕಾಶಕರು ಮತ್ತು ಲೇಖಕರ ಕೃತಿಗಳಿಗೆ ಈ ವೇದಿಕೆ ಉತ್ತಮವಾಗಿದ್ದು, ಆನ್ಲೈನ್ ಮೂಲಕ ತಮ್ಮ ಪುಸ್ತಕಗಳನ್ನು ನೇರವಾಗಿ ತಮ್ಮ ಓದುಗರಿಗೆ ತಲುಪುವಂತೆ ಮಾಡಬಹುದು. ಆನ್ಲೈನ್ ಮಾರುಕಟ್ಟೆಯ ಮೂಲಕ ಓದುವ ವರ್ಗವನ್ನು ಹೆಚ್ಚಿಸುವ ಪ್ರಮುಖ ಯೋಜನೆ ಇದರದ್ದಾಗಿದೆ.ಲೇಖಕ-ಪ್ರಕಾಶಕರಾಗಿ ನೀವೇ ಪುಸ್ತಕ ಪ್ರಕಟಿಸಿರುವುದು ಸರಿಯಷ್ಟೇ; ಇದೊಂದು ಸಾಹಸದಾಯಕವೇ. ಮೆಚ್ಚುವಂತದ್ದೇ. ಬೃಹತ್ಮಟ್ಟದ ಉದ್ಯಮಶೀಲ ಪುಸ್ತಕಗಳ ಅಂಗಡಿಯಲ್ಲಿ ನಿಮ್ಮ ಪುಸ್ತಕಗಳನ್ನು ಮಾರಾಟಕ್ಕೆ ಇಡುತ್ತಿಲ್ಲವೆ? ಚಿಂತಿಸಬೇಡಿ. ನಿಮ್ಮ ಪುಸ್ತಕಗಳನ್ನು ನಮಗೆ ಕಳುಹಿಸಿಕೊಡಿ; ನಾವು ನಿಮ್ಮ ಪುಸ್ತಕಗಳಿಗೆ ಆನ್ಲೈನ್ ಮಾರುಕಟ್ಟೆಯನ್ನು ಒದಗಿಸುತ್ತೇವೆ.


ದೊಡ್ಡಮಟ್ಟದ ಪುಸ್ತಕ ಮಾರಾಟದ ಅಂಗಡಿಗಳಿಗೆ ಭಾರೀ ರಿಯಾಯ್ತಿ ನೀಡುವ ಬದಲು ನಾವೇ ಓದುಗರಿಗೆ ನೇರ ಮಾರಾಟ ಮಾಡಿ ಅವರಿಗೇ ಹೆಚ್ಚು ರಿಯಾಯಿತಿ ಕೊಟ್ಟು ಅವರ ಪುಸ್ತಕಪ್ರೀತಿಗೆ ತಲೆಬಾಗೋಣ. ಕಳೆದ ಹತ್ತಾರು ವರ್ಷಗಳಿಂದ ಪ್ರಕಾಶನ, ಸಾಹಿತ್ಯ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ದುಡಿದು ಅನುಭವವಿರುವ ಲೇಖಕರಾಗಿರುವ ಶ್ರೀಧರ ಬನವಾಸಿ ಮತ್ತು ಕಗ್ಗೆರೆ ಪ್ರಕಾಶ್ ಈ ಯೋಜನೆಯ ಹಿಂದೆ ಇದ್ದಾರೆ. ಪುಸ್ತಕ ಓದುವಿಕೆ ಮತ್ತು ಕೊಳ್ಳುವಿಕೆ ಕೂಡ ನಮ್ಮ ಸಂಸ್ಕೃತಿಯ ಅವಿಭಾಜ್ಯ  ಅಂಗವೆಂದು ನಂಬಿರುವ ಇವರಿಬ್ಬರು ಪುಸ್ತಕ ಮಾರಾಟ ಕ್ಷೇತ್ರದಲ್ಲಿ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ.

'Panchami Media Publications' was started in 2011 with the aim of publishing different types of literary works. The purpose of the organization is to increase book culture and interest-enhancing interest into the next generation. More than 15 valuable works have been published so far.When viewing a difficult situation for book publishing and sales, the reader does not get the reader's good books and good books. In addition to Karnataka, Panchami Media Publications is planning to sell books through 'Panchami Online' in order to deliver aesthetic books to readers residing in the outskirts and outsourcing states.

Today, thousands of books are published annually in Kannada & other languages. A large number of publishers also receive a booklet. But amateur publishers and writers are only worried about how to sell their books. There is also a confusion that readers can read and read books without proper information. Systems that deliver books to the doorsteps of readers' interests and interests are not appropriate. So we do not work with our readers, writers, publishers, and our TV media. In the press it is only a handful of such work. For this reason many amateur publishers, authors, and readers have left the leaflet. The 'Panchami Online’ is intended to save all of these books on a single platform.Besides our publishing books, this is an attempt by other publishers to introduce author's books through this platform. This platform is good for new publishers and writers, and can make their books directly accessible to their readers online. This is a major plan to increase the reading class through an online market.

Instead of giving a huge discount to large-scale bookstores, we offer direct readership to readers and give them a much higher discount on their bookstore. Shridhar Banvasi and Kagarere Prakash, who have been in the publishing, literary and journalistic fields of the past ten years, are behind the project. Both book reading and shopping are believed to be an integral part of our culture and have made a new effort in the bookstore.